ಡೆಂಗ್ಯೂ ನೆಗೆಟಿವ್ ಇದ್ದರೂ ಜ್ವರದ ಬಗ್ಗೆ ನಿರ್ಲಕ್ಷ್ಯ ಬೇಡ...! ಡೆಂಗ್ಯೂ ಜೊತೆಗೆ, ಚಿಕೂನ್‌ಗುನ್ಯಾ, ಹೆಪಟೈಟಿಸ್ ಎ ನಂತಹ ನೀರಿನಿಂದ ಹರಡುವ ಕಾಯಿಲೆಗಳು ಮತ್ತು ಆರ್‌ಎಸ್‌ವಿ, ಎಚ್1ಎನ್1 ಮತ್ತು ಸೀಸನಲ್ ಇನ್‌ಫ್ಲುಯೆಂಜಾದಂತಹ ಉಸಿರಾಟದ ಕಾಯಿಲೆಗಳಂತಹ ಸೋಂಕುಗಳು ಕೂಡ ಹೆಚ್ಚಾಗುತ್ತಿದ್ದು, ಇವೆಲ್ಲವೂ ಡೆಂಗ್ಯೂ ರೀತಿಯ ರೋಗ ಲಕ್ಷಣಗಳನ್ನೇ ಹೊಂದಿರುತ್ತದೆ. ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬೆಳವಣಿಗೆ ಜನರಲ್ಲಿ ಆತಂಕವನ್ನುಂಟು ಮಾಡಿದೆ.ಈ ನಡುವೆ ಡೆಂಗ್ಯೂ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೂ ಜ್ವರ ಮತ್ತು ಇತರ ರೋಗಲಕ್ಷಣಗಳನ್ನು ನಿರ್ಲಕ್ಷಿಸದಿರಿ ಎಂದು ಸಾರ್ವಜನಿಕರಿಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.ಡೆಂಗ್ಯೂ ಜೊತೆಗೆ, ಚಿಕೂನ್‌ಗುನ್ಯಾ, ಹೆಪಟೈಟಿಸ್ ಎ ನಂತಹ ನೀರಿನಿಂದ ಹರಡುವ ಕಾಯಿಲೆಗಳು ಮತ್ತು ಆರ್‌ಎಸ್‌ವಿ, ಎಚ್1ಎನ್1 ಮತ್ತು ಸೀಸನಲ್ ಇನ್‌ಫ್ಲುಯೆಂಜಾದಂತಹ ಉಸಿರಾಟದ ಕಾಯಿಲೆಗಳಂತಹ ಸೋಂಕುಗಳು ಕೂಡ ಹೆಚ್ಚಾಗುತ್ತಿದ್ದು, ಇವೆಲ್ಲವೂ ಡೆಂಗ್ಯೂ ರೀತಿಯ ರೋಗ ಲಕ್ಷಣಗಳನ್ನೇ ಹೊಂದಿರುತ್ತದೆ.ಜುಲೈ 7 ರವರೆಗೆ ರಾಜ್ಯ ಆರೋಗ್ಯ ಇಲಾಖೆ ಸುಮಾರು 54,820 ಮಾದರಿ ಪರೀಕ್ಷೆಗಳನ್ನು ನಡೆಸಿದ್ದು, ಈ ಪೈಕಿ 7,165 ಮಂದಿಯಲ್ಲಿ ಡೆಂಗ್ಯೂ ಪಾಸಿಟಿವ್ ಬಂದಿದೆ.ಡೆಂಗ್ಯೂ ಪಾಸಿಟಿವ್ ಬಂದರೆ ಅದಕ್ಕೆ ನಿಖರ ಕಾರಣ ಮತ್ತು ಸೋಂಕಿನ ಪ್ರಕಾರವನ್ನು ತಿಳಿಯಲು ಪರೀಕ್ಷೆಯ ಸಮಯ ಮತ್ತು ಸರಿಯಾದ ರೀತಿಯ ಪರೀಕ್ಷೆಯು ಮುಖ್ಯವಾಗಿದೆ. ಜನರು ಹೊರಗೆ ಸೇವಿಸುವ ಆಹಾರ ಮತ್ತು ಕುಡಿಯುವ ನೀರಿನ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು ಎಂದು ವೈದ್ಯರು ಹೇಳಿದ್ದಾರೆ.ಒಬ್ಬ ವ್ಯಕ್ತಿಯಲ್ಲಿ ಹಠಾತ್ ತೀವ್ರ ಜ್ವರ, ತೀವ್ರ ತಲೆನೋವು, ಕಣ್ಣುಗಳ ಹಿಂದೆ ನೋವು, ಸ್ನಾಯು ಮತ್ತು ಕೀಲು ನೋವು, ವಾಕರಿಕೆ ಮತ್ತು ವಾಂತಿ. ಸ್ವಲ್ಪ ದಿನದ ನಂತರ ಚರ್ಮದಲ್ಲಿ ದದ್ದುಗಳು ಕಂಡ ಬಂದರೆ ಕೂಲಡಲೇ ವೈದ್ಯರನ್ನು ಸಂಪರ್ಕಿಸಿ, ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ಆಸ್ಟರ್ ಸಿಎಂಐ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳು ಮತ್ತು ಔಷಧದ ಸಲಹೆಗಾರರಾದ ಡಾ ಸ್ವಾತಿ ರಾಜಗೋಪಾಲ್ ಹೇಳಿದ್ದಾರೆ.ಆ್ಯಂಟಿಜೆನ್ ಮತ್ತು ಆ್ಯಂಟಿಬಾಡಿಸ್ ಪರೀಕ್ಷೆಗಳು ಡೆಂಗ್ಯೂ ಸೋಂಕನ್ನು ಕಂಡುಹಿಡಿಯಬಹುದು. ಆದಾಗ್ಯೂ, ಜ್ವರದ ಕಾಯಿಲೆ ಮತ್ತು ಡೆಂಗ್ಯೂಗೆ ಹೋಲುವ ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯ ಪರೀಕ್ಷೆಯು ನೆಗೆಟಿವ್ ಬಂದರೂ ಅದನ್ನು ನಿರ್ಲಕ್ಷಿಸಬಾರದು. ಏಕೆಂದರೆ, ಚಿಕೂನ್‌ಗುನ್ಯಾ ಅಥವಾ ಝಿಕಾ ಸೋಂಕುಗಳು ಕೂಡ ಇದೇ ಲಕ್ಷಣಗಳನ್ನು ಹೊಂದಿರುತ್ತದೆ ಎಂದು ತಿಳಿಸಿದ್ದಾರೆ.ಇದೇ ಡೆಂಗ್ಯೂ ಸೇರಿ ಇತರೆ ಸಾಂಕ್ರಾಮಿಕ ರೋಗಗಳಿಗೆ ಸ್ವಯಂ ಚಿಕಿತ್ಸೆ ಪಡೆಯುವ ಜನರಿಗೂ ವೈದ್ಯರು ಎಚ್ಚರಿಕೆ ನೀಡಿದ್ದಾರೆ.ಸ್ವಲ್ಪ ನಿರ್ಲಕ್ಷ್ಯವಹಿಸಿದರೂ ರೋಗ ಉಲ್ಬಣಗೊಳ್ಳಬಹುದು. ಪ್ರಾಣಕ್ಕೇ ಕುತ್ತು ತರುವ ಸಾಧ್ಯತೆಗಳಿರುತ್ತವೆ ಎಂದು ಎಂದು ಅಪೋಲೋ ಕ್ಲಿನಿಕ್‌ನ ವೈದ್ಯ ಡಾ.ಮುಕೇಶ್ ಬುಧ್ವಾನಿ ಹೇಳಿದ್ದಾರೆ.ಸ್ವಯಂ-ಚಿಕಿತ್ಸೆಯು ಅಗತ್ಯವಾದ ನಿರ್ಣಾಯಕ ಆರೈಕೆಯನ್ನು ಮುಂದೂಡುವುದಲ್ಲದೆ, ಅಪಾಯವನ್ನು ಹೆಚ್ಚಿಸುವ ಮೂಲಕ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ಮತ್ತಷ್ಟು ಹದಗೆಡಿಸುತ್ತದೆ ಎಂದು ತಿಳಿಸಿದ್ದಾರೆ.